Cultural Reports

 

Programme Details of the Year 2018-19   

 

S.No

Date

 Details of the programme

Guest

Remark

1

21-6-2018

 Vishva Yoga Day  Celebration

All Staff and Student

10-00 To 12-30

2

 Staff Meeting  about academic work

With administrator

2-30 to4-30

  3

26-6-2018

  ಅಂತರಾಷ್ಟ್ರೀಯ ಮಾಧಕ ವಸ್ತು ನಿಶೇಧ ದಿನಾಚರಣೆ

ಎನ್.ಎಸ್.ಎಸ್ ಘಟಕಗಳ ವತಿಯಿಂದ ಆಚರಿಸಿದ ಈ ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್.ಮುರಗೋಡಮಠ, ಪ್ರೊ.ಎಸ್.ಆರ್.ಯೆಮ್ಮಿ ಮಾಧಕ ಧ್ರವ್ಯಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಬಗ್ಗೆ ತಿಳುವಳಿಕೆ ನೀಡಿದರು. ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಡಾ.ಮಹೇಶ ಹೊರಕೇರಿ ಆಯೋಜಿಸಿದ್ದರು

೧೦-೩೦ ರಿಂದ ೧೧-೩೦ ವರೆಗೆ

4

6-7-2018

      ವಿಶ್ವ ಪರಿಸರ ದಿನಾಚರಣೆ

ಅರಣ್ಯ ಇಲಾಖೆ ಕಲಘಟಗಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶ್ರೀ ಪ್ರಕಾಶ ನಾರ್ವೇಕರ ಮತ್ತ ಶ್ರೀ ಏ.ಆರ್. ಕಡೆಮನಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

೧೨-೦೦ ರಿಂದ ೧-೩೦ ವರೆಗೆ

5

7-7-2018

೨೦೧೮-೧೯ ನೆಯ ಶ್ಯಕ್ಷಣಿಕ ವರ್ಷಕದ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯ

೧೨-೦೦   - ೧-೦೦

6

12-7-2018

       ವಿಶ್ವ ಜನಸಂಖ್ಯಾ ದಿನಾಚರಣೆ

ರಾಷ್ಟೀಯ ಸೇವಾ ಯೋಜನೆಯ ಸಹಯೋಗದಲ್ಲಿ ಆಚರಿಸಲಾಯಿತು.

೨-೩೦-೩-೩೦

7

18-7-2018

೨೦೧೮-೧೯ ನೆಯ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧನ ಸಮಾರಂಭ

ರೆ.ಬ್ರ.ನಿಜು ಥಾಮಸ್ ಮತ್ತು ಸರ್ವ ಸಿಬ್ಬಂದಿ ಉಪಸ್ಥಿತರಿದ್ದರು.

೯-೫೦ ರಿಂದ ೧೦-೧೫

8

20-7-2018

ರಾಷ್ಟ್ರೀಯ ಮಲೇರಿಯಾ ವಿರೋಧಿ ಹಾಗೂ ಅಂತರಾಷ್ಟ್ರೀಯ ಮಾಧಕ ದ್ರವ್ಯ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ

ಡಾ.ಎಸ್.ಕೆ.ಮಾನಕರ ಹಾಗೂ ಡಾ. ಎಸ್.ಡಿ. ಪೋಳ ಅವರು ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.

೧೨-೩೦ ರಿಂದ ೨-೦೦ ವರೆಗೆ

9

21-07-2018

      ಸಿಬ್ಬಂದಿ ಸಭೆ ಕರೆಯಲಾಗಿತ್ತು

೨೦೧೮-೧೯ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕುರಿತು ಚರ್ಚಿಸಲಾಯಿತು.

೧೧-೩೦-    ೧೨-೩೦  ರ ವರೆಗೆ

10

25-7-2018

ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಉದ್ಘಾಟಕರಾದ ಸನ್ಮಾನ್ಯ ಶ್ರೀ ಸಿ.ಎಂ.      ನಿಂಬಣ್ಣವರ ಅತಿಥಿಳಾಗಿ ಪ್ರೊ. ಡಿ.ಎಂ. ನಿಡವಣೆ, ಜಂಟಿನಿರ‍್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಇವರು ಅಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿಗಳಾದ ರೆ.ಬ್ರ. ನಿಜು ಥಾಮಸ್ ಅವರು ವಹಿಸಿದ್ದರು.

೧೧-೦೦ ರಿಂದ ೨-೦೦ ಗಂಟೆ

11

30-7-2018

ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸ್ವಚ್ಚತಾ ಅಭಿಯಾನ ಜಾತಾ

ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸ್ವಚ್ಚತಾ ಅಭಿಯಾನ ಜಾತಾವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ಎಸ್. ಗಾಡದ ಅವರು ಉದ್ಘಾಟಿಸಿದರು.

೧೦-೩೦ ರಿಂದ ೧೨-೩೦

12

1-8-2018

ನಮ್ಮ ಸಂಸ್ಥೆಯ ಸುಪಿರಿಯರ್ ಜನರಲ್ ಮತ್ತು ಪ್ರಾವಿನ್ಸ ಅವರು ಮಹಾವಿದ್ಯಾಲಯಕ್ಕೆ ಬೆಟ್ಟಿಕೊಟ್ಟಿದ್ದರು

ಮೊಂಟ್ ಫೋರ್ಟ ಬ್ರದರ‍್ಸ ಆಫ್ ಸೇಂಟ್ ಗೇಬ್ರಿಯಲ್ ನ ಸುಪಿರಿಯರ್ ಜನರಲ್ ರೆ.ಬ್ರ. ಜಾನ್ ಕಲ್ಲಕೆರೆಲ್ ಮತ್ತು ಯರ‍್ಕಾಡ ಪ್ರಾವಿನ್ಸ ರೆ. ಬ್ರ. ಪಿ. ಜೆ. ಜಾರ್ಜ ವಿದ್ಯಾಥಿಗಳನ್ನು ಹಾಗೂ ಸಿಬ್ಬಂದಿಯವನ್ನು ಉದ್ದೇಶಿಸಿ ಮಾತನಾಡಿದರು.

೧೧-೦೦ ರಿಂದ ೨-೦೦

13

2-8-2018

  ೨೨ ನೆಯ ರಾಷ್ಟ್ರಮಟ್ಟದ ಪುಸ್ತಕ ಓದುವ ದಿನ

ನಮ್ಮ ಮಹಾವಿದ್ಯಾಲಯ ಮತ್ತು ಸಂತ ಝೇವಿಯರ್ ಪ್ರೌಢ ಶಾಲೆ ತುಮರಿಕೊಪ್ಪ ಹಾಗೂ ಗುಡ್ ನ್ಯೂಸ್ ಪ. ಪೂ. ಕಾಲೇಜಿನಲ್ಲಿ ವಿಶ್ವ ಓದುವ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ರಾಮು ಮೂಲಿಗಿ ಮತ್ತು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಡಾ. ಚರಂತಿಮಠ ಅವರು ಆಗಮಿಸಿದ್ದರು.

 ಮಧ್ಯಾಹ್ನ   ೨-೦೦ ರಿಂದ  ೩-೩೦

14

11-8-208

ಪ್ರತಿಭಾ ಪ್ರದರ್ಶನ ಮತ್ತು ಹಳೆಯ ವಿದ್ಯಾರ್ಥಿಗಳ ಸಮಾವೇಶ

ನಮ್ಮ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರತಿಭಾ ಪ್ರದರ್ಶನದ ನಿಮಿತ್ಯ ವಿದ್ಯಾಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಎಂ. ಆರ್. ತೋಟಗಂಟಿ ಅವರು ಆಗಮಿಸಿದ್ದರು.

೧೦-೩೦ ರಿಂದ ೫-೦೦ ವರೆಗೆ

15

20-8-2018

ಸದ್ಭಾವನಾ ದಿನ

ಮಹಾವಿದ್ಯಾಲಯದಲ್ಲಿ ಸದ್ಭಾವನಾ ದಿನದ ಮಹತ್ವವನ್ನ ತಿಲಿಸಿ ,ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರತಿಜ್ಙೆಯನ್ನು ಬೊಧಿಸಲಾಯಿತು.

ಬೆಳಗಿನ ೯-೫೦

16

24-8-2018

ವಿಶೇಷ ಉಪನ್ಯಾಸ ಕಾರ್ಯಕ್ರಮ

ಮಹಾವಿದ್ಯಾಲಯದ ಕನ್ನಡ, ಇತಿಹಾಸ, ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗ ಹಾಗೂ ಅಖಿಲ ಭಾರತ ಶರಣ ಸಹಿತ್ಯ ಪರಿಷತ್ತು ಕಲಘಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಬಸವಣ್ಣನವರ ಕಾಯಕ ಸಿದ್ಧಾಂತ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಡಾ. ಸಂಗಮೇಶ ಕಲಹಾಳ ಅವರು ಆಗಮಿಸಿದ್ದರು.

ಬೆಳಗಿನ ೧೧-೩೦ ರಿಂದ ೨-೦೦

 

17

4-9-2018

ಚರ್ಮರೋಗಗಳ ಕುರಿತು ಅರಿವು ಮತ್ತು ಸಲಹಾ ಕಾರ್ಯಕ್ರಮ

ಗುಡ್ ನ್ಯೂಸ್ ಪ್ರಥಮ ದರ್ಜೆ ಮಹಾವಿದ್ಯಾಲಯದ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಯುವ ರೆಡ್ ಕ್ರಾಸ್ ಘಟಕ ಮತ್ತು ಮಹಿಳಾ ವಿಭಾಗಗಳ ಮತ್ತು ಓಂ ಮರಿಯಾ ಗೃಹಿಣಿ ತರಬೇತಿ ಕೇಂದ್ರಗಳ ಸಹಯೋಗದಲ್ಲಿ ನಡೆಸಲಾಯಿತು. ಸಂಪನ್ಮೂಲ ವ್ಯತ್ಕಿಗಳಾಗಿ ಡಾ. ಮಿತಾಕ್ಷರಿ ಹೂಗಾರ ಅವರು ಆಗಮಿಸಿದ್ದರು.

ಬೆಳಗಿನ ೧೧-೩೦ ರಿಂದ ೧-೩೦

18

4-9-2018

ಮತದಾನದ ಮಹತ್ವ ಮತ್ತು ಅರಿವು ಕಾರ್ಯಕ್ರಮ

ಕಾಲೇಜಿನ ಸ್ವೈಪ್ ಘಟಕದ ವತಿಯಿಂಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಬಸವರಾಜೇಶ್ವರಿ ಪಾಟೀಲ, ಪ್ರೊ. ಮೋಹನ ಕಳಸೂರ ಅವರು ಆಗಮಿಸಿದ್ದರು.

 

19

6-9-2018

ಶಿಕ್ಷಕ ದಿನಾಚರಣೆ ಕಾರ್ಯಕ್ರಮ

ಮಹಾವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆಯನ್ನು ಅಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಧ್ಯಾಪಕರನೇಕರು ಶಿಕ್ಷಕ ದಿನಾರಣೆಯ ಮತ್ತು ಶಿಕ್ಷಕರ ಮಹತ್ವವನ್ನು ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ವಿನೋಧದ ಆಟಗಳನ್ನು ಆಡಿಸಿದರು. ವಿಜೇತರಾದವರಿಗೆ ಬಹುಮಾನಗಳನ್ನು ನೀಡಿದರು.

 

20

11-9-2018

ಶ್ರೀ ಸ್ವಾಮಿ ವಿವೇಕಾನಂದ ಚಿಕ್ಯಗೊ ಭಾಷಣದ ೧೨೫ ನೆಯ ವರ್ಷಾಚರಣೆಯ ಕಾರ್ಯಕ್ರಮ.

ಶ್ರೀ ಸ್ವಾಮಿ ವಿವೇಕಾನಂದರು ಅಮೇರಿಕೆಯ ಚಿಕ್ಯಾಗೊ ನಗರದಲ್ಲಿ ೧೮೯೩ ನವ್ಹಂಬರ್ ೧೧ ರಂದು ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ೧೨೫ ನೆಯ ವರ್ಷಾಚರಣೆಯ ಕಾರ್ಯಕ್ರಮವನ್ನು ನಮ್ಮ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಧಾರವಾಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ನವೀನಕುಮಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಂದು ವಿವೇಕಾನಂದರು ಮಾತನಾಡಿದ ರೀತಿ ಹಾಗೂ ಅದರ ಪ್ರಭಾವವನ್ನು ಕುರಿತು ಮಾತನಾಡಿದರು.

೨-೦೦ ರಿಂದ  ೩-೦೦ ಗಂಟೆಯ ವರೆಗೆ

21

22-9-2018

ಭಾರತ ಸಂವಿಧಾನ ಕುರಿತು ರಸ ಪ್ರಶ್ನೆ

ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿಗಳು ಭಾರತ ಸಂವಿಧಾನದ ಮೇಲೆ ಇಂದು ರಸ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡಲಾಗಿತ್ತು. ಸದರಿ ಕಾರ್ಯಕ್ರಮದ ಆಯೋಜನೆಗೆ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ ಬೆಟಗಾರ ಮಾರ್ಗದರ್ಶನ ಮಾಡಿದ್ದರು. ಶ್ರೀ ಬಸವರಾಜ ಹುಲಿಕಟ್ಟಿ ನೆರವು ನೀಡಿದ್ದರು.

೨-೦೦ ರಿಂದ  ೪-೩೦ ವರೆಗೆ

22

24-9-2018

ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ವರ್ಷಾಚರನೆಯ ಉದ್ಘಾಟನಾ ಸಮರಂಭ

ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವತಿಯಿಂದ ಇಂದು ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಉದ್ಘಾಟನೆಯನ್ನು ನಮ್ಮ ತಾಲೂಕಿನ ಪ್ರೊಬೇಷನರಿ ತಹಶೀಲ್ದಾರರಾದ ಶ್ರೀ ಯಲ್ಲಪ್ಪ ಗೋಣೆಣ್ಣವರ ಆಗಮಿಸಿದ್ದರು. ಅತಿಥಿಗಳಾಗಿ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಕುಮಾರಿ ಮಂಜುಳಾ ಮುನವಳ್ಳಿ ಆಗಮಿಸಿದ್ದರು.  ಪ್ರಾಚಾರ್ಯರಾದ ಡಾ. ಬಿ. ಜಿ. ಬಿರಾದಾರ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಡಾ. ವಿ. ಆರ್. ಬೆಟಗಾರ, ಪ್ರೊ. ಜಿ. ಆರ್. ಸೂಳಿಭಾವಿ, ಪ್ರೊ. ಎಸ್. ಆರ್. ಯೆಮ್ಮಿ , ಪ್ರೊ. ಎಂ.ಪಿ. ಹಿರೇಮಠ ಮತ್ತು ಸಹಾಯಕ ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಮಹಾದೇವ ಉಳ್ಳಾಗಡ್ಡಿ ಅವರನ್ನು ಸನ್ಮಾನಿಸಲಾಯಿತು.  ಯೋಜನಾಧಿಕಾರಿಗಳಾದ ಡಾ. ಮಹೇಶ ಹೊರಕೇರಿ ಮತ್ತು ಝಾಕಿಯಾ ಸೌದಾಗರ ಕಾರ್ಯಕ್ರಮವನ್ನು ಆಯೋಜಿಸಿದ್ದರು.

೨-೦೦ ರಿಂದ  ೪-೦೦ ವರೆಗೆ

23

27-9-2018

ಗ್ರಂಥಾಲಯ ವಿಜ್ಞಾನ ಪಿತಮಹ ಡಾ.ರಂಗನಾಥನ್ ಪುಣ್ಯ ಸ್ಮರಣೆ ಕಾರ್ಯಕ್ರಮ

ಇಂದು ನಮ್ಮ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ರಂಗನಾಥನ್ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಮುಖ್ಯತಿಥಿಗಳಾಗಿ ಡಾ. ಪಂಚಾಕ್ಷರಿ ಹಿರೇಮಠ ಮತ್ತು ಪ್ರೊ. ಬಸವರಾಜ ಕೆಂದೂಳಿ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಬಿ. ಜಿ. ಬಿರಾದಾರ ವಹಿಸಿದ್ದರು.

 

24

2-10-2018

ಮಹಾತ್ಮಾ ಗಾಂಧಿಜೀ ಅವರ ೧೫೦ ನೆಯ ಮತ್ತು ಲಾಲ್ ಬಹದ್ದೂರ ಶಾಸ್ತ್ರೀಜಿ ಅವರ ೧೧೫ ನೆಯ ಜಯಂತಿಯನ್ನು ಅಚರಿಸಲಾಯಿತು.

ಜನ ಸಂಪರ್ಕ ಕಾರ್ಯಾಲಯ, ಧಾರವಾಡ, ನೆಹರು ಯುವ ಕೇಂದ್ರ ಧಾರವಾಡ, ಗುಡ್ ನ್ಯೂಸ್ ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕಗಳ ಸಹಯೋಗದಲ್ಲಿ ಮಹಾತ್ಮಾ ಗಾಂಧಿಜೀಯವರ ಜಯಂತಿ, ಲಾಲ್ ಬಹದ್ದೂರ ಶಾಸ್ತ್ರೀಜಿ ಅವರ ಜಯಂತಿ ಮತ್ತು ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಉದ್ಘಾಟಕರಾಗಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಬಿ. ಕೆ. ಹುರಕಡ್ಲಿ ಅವರು ಆಗಮಿಸಿದ್ದರು. ಮುಖ್ಯ ಉಪನ್ಯಾಸಕರಾಗಿ ಪ್ರೊ. ಜಿ. ಆರ್. ಸೂಲಿಭಾವಿ ವಅವರು ಆಗಮಿಸಿದ್ದರು.  ಅಧ್ಯಕ್ಷತೆಯನ್ನು ಡಾ. ಬಿ. ಜಿ. ಬಿರಾದಾರ ಅವರು ವಹಿಸಿದ್ದರು.

೧೧-೦೦ ರಿಂದ ೧-೩೦

25

6-10-2018

 ಪಠ್ಯಾಧಾರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕನ್ನಡ ವಿಭಾಗದ ಮತ್ತು ಆಂತರಿಕ ಗುಣಮಟ್ಟ ಭರವಶಾ ಕೋಶ ( )ಗಳ ಸಹಯೋಗದಲ್ಲಿ ಇಂದು ಶ್ರೀ ಕುವೆಂಪು ಅವರ ಬೆರಳ್ ಗೆ ಕೊರಳ್ ನಾಟಕದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯತಿಥಿಗಳಾಗಿ ಸವದತ್ತಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಾಯ್. ಎಂ. ಯಾಕೊಳ್ಳಿ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ರೆ. ಬ್ರ. ನಿಜು ಥಾಮಸ್ ಅವರು ವಹಿಸಿದ್ದರು.

೧೧-೩೦ ರಿಂದ ೧೨-೩೦

 

ಎರಡನೆಯ ಅವಧಿಯ ಕಾರ್ಯಕ್ರಮಗಳ ವಿವರ


1

೧೪-೧-೨೦೧೯

ಶ್ರೀ ಸ್ವಾಮಿ ವಿವೇಕಾನಂದ ೧೫೬ ನೆಯ ಜಯಂತಿ

ಮಹಾವಿದ್ಯಾಲಯದ ಎನ್.ಎಸ್. ಎಸ್. ಘಟಕಗಳ ಆಶ್ರಯದಲ್ಲಿ ಇಂದು ಶ್ರೀ ಸ್ವಾಮಿ ವಿವೇಕಾನಂದರ ಒಂದನೂರಾ ಐವತ್ತಾರನೆಯ ಜಯಂತಿಯನ್ನು ಆಚರಿಸಲಾಯಿತು. ಈಕಾರ್ಯಕ್ರಮಕ್ಕೆ ಮುಖ್ಯತಿಥಿಗಳಾಗಿ ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ನಾಗೇಶ ಅವರು ಆಗಮಿಸಿದ್ಧರು, ಅವರು ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡುತ್ತ ವಿವೇಕಾನಂದರು ಯಾವ ಯುವಕನ್ನು ದೇಶದ ಶಕ್ತಿ, ಯುವಕರೇ ದೇಶದ ಸಂಪತ್ತು ಎಂದು ನಂಬಿಗೆಯಿಂದ ಹೇಳಿದರೋ, ಆ ಯುವಕರೇ ವಿವೇಕಾನಂದರ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳದಿರುವುದು ವಿಪರ‍್ಯಾಸ ಸಂಗತಿಯೆಂದು ಯುವಜನತೆಯ ಸಮಕಾಲೀನ ಆಲೋಚನಾಕ್ರಮವನ್ನು ಕುರಿತು ಆತಂಕ ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಮಹಾವಿದ್ಯಾಲಯದಆಡಳಿತಾಧಿಕಾರಿ ರೆ. ಬ್ರ. ನಿಜು ಥಾಮಸ್, ಪ್ರಾಧ್ಯಾಪಕರಾದ ಪ್ರೊ. ಎಂ. ಎಸ್. ಮುರಗೋಡಮಠ, ಡಾ. ವಿ. ಆರ್. ಬೆಟಗಾರ, ಶ್ರೀ ಎಸ್. ಆರ್. ಯೆಮ್ಮಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಯೋಜನಾಧಿಕಾರಿಗಳಾದ ಡಾ. ಮಹೇಶ ಹೊರಕೇರಿ ಅತಿಥಿಗಳನ್ನು ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರ ಪ್ರಮೋದ ನಾರ್ವೇಕರ ವಂದಿಸಿದರು.  ಹೇಮಂತ ಶೆಟ್ಟಿ ನಿರೂಪಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ ಶಾಂತಲಾ ನಾಯಕ, ಅನಿತಾ ಭಟ್ಟ, ಮಹಾದೇವ ಉಳ್ಳಾಗಡ್ಡಿ, ಡಾ. ನಾಗೇಶ ಕುಸುಗಲ್ಲ, ಅರ್ಚನಾ ಬಿರಾದಾರ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

2

೨೫-೦೧-೨೦೧೯

೯ ನೆಯ ರಾಷ್ಟ್ರೀಯ ಮತದಾರ ದಿನಾಚರಣೆ-೨೦೧೯

ಮಹಾವಿದ್ಯಾಲಯದ ಸ್ವೀಪ್ , ರಾಜ್ಯಶಾಸ್ತ್ರ ವಿಭಾಗ, ಎನ್.ಎಸ್.ಎಸ್.ಘಟಕಗಳು, ಮಹಿಳಾ ವೇದಿಕೆ, ರೋವರ್ಸ ಸ್ಕೌಟ್ ಘಟಕಗಳ ಸಹಯೋಗದಲ್ಲಿ  ಇಂದು ರಾಷ್ಟ್ರೀಯ ಮತದಾನ ಜಾಗ್ರತಿ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕ. ವಿ. ವಿ. ವ್ಯಾಪ್ತಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಎಂ. ರಾಮಗಿರಿ ಮತ್ತು ಕಲಘಟಗಿಯ ನ್ಯಾಯವಾದಿಗಳಾದ ಶ್ರೀ ಅನ್ಣಪ್ಪ ಓಲೆಕಾರ ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ರೆ.ಬ್ರ.ನಿಜು ಥಾಮಸ್ ಅವರು ವಹಿಸಿದ್ದರು. ವೇದಿಕೆಯ ಮೇಲೆ ಪ್ರೊ. ಎಂ. ಎಸ್. ಮುರಗೋಡಮಠ, ಪ್ರೊ. ಎಸ್.ಆರ್.ಯೆಮ್ಮಿ, ಪ್ರೊ. ಶಾಂತಲಾ ನಾಯಕ, ಡಾ. ಮಹೇಶ ಹೊರಕೇರಿ, ಝಾಕಿಯಾ ಸೌದಾಗರ ಮುಂತಾದವರು ಉಪಸ್ಥಿತರಿದ್ದರು.

 

3

೨೬-೦೧-೨೦೧೯

೭೦ ನೆಯ ಪ್ರಜಾರಾಜ್ಯೋತ್ಸವ ದಿನಾಚರಣೆ

ಮಹಾವಿದ್ಯಾಲಯದಲ್ಲಿ ಇಂದು ೭೦ ನೆಯ ಪ್ರಜಾರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಾವಿದ್ಯಾಲಯದ ಆಡಳಿತಾಧಿಕಾರಿ ರೆ. ಬ್ರ. ನಿಜು ಥಾಮಸ್ ಅವರು ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡುತ್ತ ಭಾರತವು ವಿಭಿನ್ನ ಭಾಷೆ, ಸಂಸ್ಕೃತಿ, ಆಚಾರ ವಿಚಾರ, ಅಸಂಖ್ಯಾತ ಜಾತಿ ಧರ್ಮಗಳನ್ಮನು ಹೊಂದಿದ್ದರೂ, ಒಂದೇ ಸಂವಿಧಾನವನ್ನು ರಚಿಸಿಕೊಂಡು ನಾವೆಲ್ಲ ಭಾರತೀಯರು ಎಂಬ ಭಾನೆಯಿಂದ ಒಟ್ಟಾಗಿ ಬದುಕುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು. ಪ್ರಾಚಾರ್ಯ ಡಾ. ಬಿ. ಜಿ. ಬಿರಾದಾರ ಪ್ರೊ. ಶಿವಯೋಗಪ್ಪ ಯೆಮ್ಮಿ ,ಪ್ರೊ. ಎಂ.ಎಸ್. ಮುರಗೋಡಮಠ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

 

4

೧-೨-೨೦೧೯ ಮತ್ತು     ೨-೨-೨೦೧

ಕರ್ನಾಟಕ ವಿಶ್ವವಿದ್ಯಾಲಯ ಪ್ರಥಮ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿನ್ನು ಸಂಘಟಿಸಲಾಗಿತ್ತು.

  ಕರ್ನಾಟಕ ವಿಶ್ವವಿದ್ಯಾಲಯ ಪ್ರಥಮ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿನ್ನು ಸಂಘಟಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಘಟಿಯ ಜನಪ್ರಿಯ ಶಾಸಕರಾದ ಶ್ರೀ ಸಿ. ಎಂ. ನಿಂಬಣ್ಣವರ ಅವರು ಮಾಡಿದರು ಮುಖ್ಯ ಅತಿಥಿಗಳಾಗಿ ಕಲಘಟಗಿಯ ದಕ್ಷ ಪೋಲೀಸ್ ಇನಿಸ್ಪೆಕ್ಟರ್ ಶ್ರೀ ವಿಜಯಕುಮಾರ ಬಿರಾದಾರ ಮತ್ತು ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಎನ್. ಕೆ. ಚನ್ನಪ್ಪಗೌಡರ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ರೆ. ಬ್ರ. ನಿಜು ಥಾಮಸ್ ಅವರು ವಹಿಸಿದ್ದರು. ಪಂದ್ಯಾವಳಿಯಲ್ಲಿ ವಿವಿಧ ಮಹಾವಿದ್ಯಾಲಯಗಳ ಒಟ್ಟು ಹದಿನಾರು ತಂಡಗಳು ಭಾಗವಹಿಸಿದ್ದವು. ಧಾರವಾಡದ ಕೆ.ಜಿ. ನಾಡಗೇರ ದೈಹಿಕ ಶಿಕ್ಷಣ ಮಹಶಾವಿದ್ಯಾಲಯದ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಆತಿಥೇಯ ಗುಡ್ ನ್ಯೂಸ್ ಮಹಾವಿದ್ಯಾಲಯದ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಧರವಾಡದ ಶಿವಾಜಿ ಮಹಾವಿದ್ಯಾಲಯವು ತೃತೀಯ ಸ್ಥಾನವನ್ನು ಪಡೆದುಕೊಂಡಿತು ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಯಾಗಿ ತುಮರಿಕೊಪ್ಪದ ಹೋಲಿ ರೋಜರಿ ಚರ್ಚಿನ ಮುಖ್ಯಗುರುಗಳಾದ ರೆ. ಫಾ. ಅಂತೋನಿ ಫರ್ನಾಂಡಿಸ್ ಮತ್ತು ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಕೆ.ಜೆ. ರಪಾಟಿ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ರೆ. ಬ್ರ. ನಿಜು ಥಾಮಸ್ ಅವರು ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಸರ್ವ ಸಿಬ್ಬಂದಿ ಉಪಸ್ಥಿತರಿದ್ದರು. 

 

5

೨೧-೨-೨೦೧೯ ರಿಂದ
೨೭-೨-೨೦೧೯ ವರೆಗೆ

 ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ನಮ್ಮ ಮಹಾವಿದ್ಯಲಯದ ರಷ್ಟ್ರೀಯ ಸೇವಾ ಯೋಜನೆಯ ೧ ಮತ್ತು ೨ ನೆಯ ಘಟಕಗಳ ವಾರ್ಷಿಕ ವಿಸೆಷ ಶಿಬಿರವನ್ನು ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ರಿಯಾಶೀಲ ಯೋಜನಾಧಿಕಾರಿಗಳಾದ ಡಾ. ಮಹೇಶ ಹೊರಕೇರಿ, ಶ್ರೀಮತಿ ಝಾಕಿಯಾ ಸೌದಾಗರ ಅವರ ಸಮರ್ಥ ಮಾರ್ಗದರ್ಶನದಲ್ಲಿ ಏಳುದಿನಗಳ ಕಾಲ ನಡೆಸಲಾಯಿತು.ಈ ವರ್ಷದ ಎನ್.ಎಸ್.ಎಸ್. ನ ಧ್ಯೇಯ ವಾಕ್ಯಯು  ಜೀವಜಲ ಸಂರಕ್ಷಣೆ ಎನ್. ಎಸ್.ಎಸ್. ಹೊಣೆ ಆಗಿತ್ತು.

 

6

೫-೩-೨೦೧೯

ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.

ಮಹಾವಿದ್ಯಾಲಯದ ಸ್ವೀಪ್ ಸಮಿತಿ, ಎನ್.ಎಸ್.ಎಸ್. ಘಟಕ ಹಾಗೂ ಪಟ್ಟಣ ಪಂಚಾಯತ್ ಕಲಘಟಗಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾನ ಮಾಡುವ  ವಿದಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ತೋರಿಸಲಾಯಿತು. ಪಟ್ಟಣ ಪಂಚಾಯತ್ ಅಧಿಕಾರಿಗಳಾದ ಶ್ರೀ ಚಂದ್ರಶೇಖರ ಮತ್ತು ಶ್ರೀ ಶರಣಪ್ಪ ಉಣಕಲ್ ಮುಂತಾದವರು  ಮತದಾನ ಮಾಡುವ ವಿಧಾನ ಮತ್ತು ಮಹತ್ವವನ್ನು ಕುರಿತು ತಿಳಿಸಿ ಹೇಳಿದರು. ಮಹಾವಿದ್ಯಾಲಯದ ಸ್ವೀಪ್ ಸಮಿತಿ ಸಂಚಾಲಕರಾದ ಡಾ. ವಿ. ಆರ್. ಬೆಟಗಾರ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಕುಮಾರ ಮಂಜುನಾಥ ಮನಗುಂಡಿ ವಂದಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

7

೮-೩-೨೦೧೯

   ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ನಮ್ಮ ಮಹಾವಿದ್ಯಾಲಯದ ಮಹಿಳಾ ವೇದಿಕೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಪದ್ಮಾವತಿ ಜಿ. ಅವರು ಆಗಮಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ರೆ. ಬ್ರ. ನಿಜು ಥಾಮಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷೆ ಪ್ರೊ. ಶಾಂತಲಾ ನಾಯಕ, ಪ್ರಾಚಾರ್ಯ ಡಾ. ಬಿ.ಜಿ.ಬಿರಾದಾರ, ಪ್ರೊ. ಎಂ.ಎಸ್. ಮುರಗೋಡಮಠ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಮುಂದುಗಡೆಯಲ್ಲಿ ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

11-00 UÀAmÉUɸÀ

8

೩೦-೩-೨೦೧೯

            ರಕ್ತದಾನ ಶಿಬಿರ

ನಮ್ಮ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ, ಸ. ಪ್ರ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ-೨ ಮತ್ತು ರಾಷ್ಟ್ರೋತ್ತಾನ ಬ್ಲಡ್ ಬ್ಯಾಂಕ್ ಹುಬ್ಬಳ್ಳಿ   ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಒಟ್ಟು ಮೂವತ್ತು ವಿದ್ಯಾರ್ಥಿಗಳು ರಕ್ತದಾನವನ್ನು ಮಾಡಿದರು.

 

9

೩-೪-೨೦೧೯

 ಸಾಂಸ್ಕೃತಿಕ ದಿನಾಚರಣೆ

 ಇಂದು ಮಹಾವಿದ್ಯಾಲಯದ ಸಾಸ್ಕ್ರತಿ ವಿಭಾಗದ ವತಿಯಿಂದ ಸಾಂಸ್ಕೃತಿಕ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿ- ವಿದ್ಯಾರ್ಥಿನಿಯ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

 

10

೪-೪-೨೦೧೯

 ಪಠ್ಯೇತರ ಚಟುವಟಇಕೆಗಳ ಸಮಾರೋಪ ಸಮಾರಂಭ